Saturday, April 18, 2026

  

ಬಸವಣ್ಣ ವಚನ

ಕುಂಬಳಕಾಯಿಗೆ ಕಬ್ಬುನದ ಕಟ್ಟು ಕೊಟ್ಟರೆ
ಕೊಳೆವುದಲ್ಲದೆ ಬಲು ಹಾಗಬಲ್ಲುದೇ ?

ಅಳಿಮನದವಂಗೆ ಶಿವದೀಕ್ಷೆಯ ಕೊಟ್ಟರೆ
ಭಕ್ತಿ ಎಂತಹುದೋ ? ಮುನ್ನಿನಂತೆ

ಕೂಡಲ ಸಂಗಯ್ಯಾ ಮನಹೀನನ ಮೀಸಲು ಕಾಯ್ದಿರಿಸಿದಂತೆ !!

(ಕುಂಬಳಕಾಯಿಗೆ ಕಬ್ಬಿಣದ ಕಟ್ಟು ಹಾಕಿದರೆ ಅದು ಕೊಳೆತುಹೋಗದೆ ಬಲಿತು ದೊಡ್ಡದಾಗುವುದೇ .?
ಪಾಪಾತ್ಮನಿಗೆ ಲಿಂಗದೀಕ್ಷೆ ಕೊಟ್ಟರೆ ಅವನಲ್ಲಿ ಭಕ್ತಿ ಬೆಳೆದು ಮುಕ್ತಿ ದಾರಿ ಹೊಳೆದೀತೆ.?
ಕೂಡಲ ಸಂಗಯ್ಯಾ ಬಾಹ್ಯದ ತೋರಿಕೆಯ ದೀಕ್ಷೆಗಿಂತ ಅಂತರಂಗದ ಶುದ್ಧಿ ಮುಖ್ಯ.)

No comments:

Post a Comment

   ಒಳ್ಳೆ ಒಳ್ಳೆಯವರು ಹಾಳಾಗಿ ಹೋಗುತ್ತ್ ಇದ್ದರೆ  ಬೆಳ್ಳುಳ್ಳಿ ಸಿಪ್ಪೆ ನನ್ನಹಿಡಿ ನನ್ನಹಿಡಿ ಅಂತು