Wednesday, November 19, 2025

   

ಒಣಗಿದ ಸೌದೆ ಉರಿಯುವುದು ಚೆನ್ನಹಸಿ ಸೌದೆ ಬರಿ ಹೊಗೆಯೇ ಅಣ್ಣ.

ಧ್ಯಾನದ ಪರಂಜ್ಯೋತಿ ಬೆಳಗಲು ಸಂಸ್ಕಾರವೆ ಚೆನ್ನತಾಮಸ ರಾಜಸ ಚಂಚಲತೆ ಸಮಯ ವ್ಯರ್ಥವೋ ಅಣ್ಣ.

ವಿಶ್ರಾಂತ ಮನ ನಲಿವುದು ಚೆನ್ನಸುಸ್ತಾದ ಮನ ಧ್ಯಾನವೆಂದು ನಿದ್ರಿಸುವುದೋ ಅಣ್ಣ.

ದ್ಯಾನಕೆ ಕುಳಿತು ನರಳುವುದೇನ್ಚೆನ್ನ ಸ್ವಲ್ಪ ಆಸನಾಭ್ಯಾಸದಿ ಆಸನ ಸಿದ್ದುಸಿಕೋ ಅಣ್ಣ.

ಪ್ರಾಣಾಯಾಮದಿ ಉಸಿರಾಟವು ಚೆನ್ನಕೆಟ್ಟುಸಿರಿನಿಂದ ಧ್ಯಾನವೆಲ್ಲಿಯದೋ ಅಣ್ಣ.

ಊರ ಜಂಜಾಟವ ನೀಗಿಸಲು ಧಾರಣೆಯೇ ಚೆನ್ನಸೊಗಸಾದ ದ್ಯಾನಕೆ ಅನಾಪಾನಾ ಸತಿಯೇ ಅಣ್ಣ🌹

No comments:

Post a Comment

   ಒಳ್ಳೆ ಒಳ್ಳೆಯವರು ಹಾಳಾಗಿ ಹೋಗುತ್ತ್ ಇದ್ದರೆ  ಬೆಳ್ಳುಳ್ಳಿ ಸಿಪ್ಪೆ ನನ್ನಹಿಡಿ ನನ್ನಹಿಡಿ ಅಂತು